ಗಂಗಾವತಿ: ತಾಲೂಕಿನ ಶ್ರೀ ರಾಮನಗರದಲ್ಲಿರುವ ಧೋನಿಪುಡಿ ಪ್ರೌಢಶಾಲೆಯ ಯುವರಾಜ್ ತಂದೆ ಲಿಂಗರಾಜ್ ಎಂಬ ವಿದ್ಯಾರ್ಥಿಯು
ಈ ಬಾರಿಯ 2023/ 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 611 ಅಂಕಗಳನ್ನು ಪಡೆದು ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆ, ಅದಕ್ಕಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಸಿಂಧೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ವರ್ಗದವರು ಶುಕ್ರವಾರ ದಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿ ಯುವರಾಜ್ ತಂದೆ ಲಿಂಗರಾಜ್ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಿ, ಗೌರವಿಸಿ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು.
