ಸಮಾನತೆಯ ಹರಿಕಾರ ಸಂವಿಧಾನ ಶಿಲ್ಪಿ. ಡಾಕ್ಟರ್ ಬಿ ಆರ್ ಅಂಬೇಡ್ಕರ್. ವ್ಯಕ್ತಿಯಲ್ಲ ಬೃಹತ್ ಶಕ್ತಿ : ದುರ್ಗೇಶ್ ದೊಡ್ಮನಿ
ಗಂಗಾವತಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ಸರ್ವರಿಗೂ ಸಹ ಬಾಳು ಸರ್ವರಿಗೂ ಸಮಪಾಲು ಎಂಬ ತತ್ವ ಅಡಿಯಲ್ಲಿ ದೇಶಕ್ಕೆ ಬೃಹತ್ ಸಂವಿಧಾನ ನೀಡಿದ. ಸಂವಿಧಾನ ಶಿಲ್ಪಿ. ಕೇವಲ ವ್ಯಕ್ತಿಯಲ್ಲ ಇಡೀ ವಿಶ್ವಕ್ಕೆ ಬೃಹತ್ ಶಕ್ತಿಯಾಗಿದ್ದಾರೆ ಎಂದು ದುರ್ಗೇಶ್ ದೊಡ್ಮನಿ ಹೇಳಿದರು. ಅವರು ಶುಕ್ರವಾರದಂದು. ಅವರ ಪತ್ನಿ ಶ್ರೀಮತಿ ಪಾರ್ವತಮ್ಮ ದುರ್ಗೇಶ್ ನಗರಸಭೆಯ ಉಪಾಧ್ಯಕ್ಷ ಹಾಗೂ ಇತರ ನೇತೃತ್ವದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪರಿ ನಿರ್ವಣಾ ದಿನಾಚರಣೆ( ಅಂಬೇಡ್ಕರ್ ಅವರ ಪುಣ್ಯಸ್ಮರಣೆ ) ಪ್ರಯುಕ್ತ. ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಗೌರವ ಪೂರಕವಾಗಿ ನಮನಗಳನ್ನು ಸಲ್ಲಿಸಿದರು ಬಳಿಕ ಮಾತನಾಡಿದರು. ಸಮಾಜದಲ್ಲಿರುವ ಅಜ್ಞಾನ ಅಂಧಕಾರ ಮೂಢನಂಬಿಕೆ ಕಂದಾಚಾರದ ಸಮಾಜದಲ್ಲಿ ನಂಬಿಕೆ. ಕಂದಾಚಾರ ಅಸ್ಪೃಶ್ಯತೆ ಸೇರಿದಂತೆ. ಸಮಾಜದಲ್ಲಿರುವ ವ್ಯಕ್ತಿಗಳು ವ್ಯಕ್ತಿಗಳಾಗಿ ಜೀವಿಸುವಂತೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂಬ ಅವರ ಸಂವಿಧಾನದಲ್ಲಿನ ಆಶಯಗಳು. ವಿಶ್ವಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಪಾರ್ವತಮ್ಮ ದುರ್ಗೇಶ್ ದೊಡ್ಡ ಮನೆ ಗಂಗಣ್ಣ ಸಿದ್ದಾಪುರ ಶಿವಪ್ಪ ಮಾದಿಗ ಹಂಪೇಶ್ ಹರಿಗೋಲ ಸುರೇಶ್ ಮುಕ್ಕುಂದಿ ಹೊನ್ನೂರಪ್ಪ ಡಾಣಾಪುರ್ ಸೇರಿದಂತೆ ಮಹಿಳೆಯರು ಯುವಕರು ಪಾಲ್ಗೊಂಡಿದ್ದರು.