ತುಂಗಭದ್ರಾ ಜಲಾಶಯ 19 ನೇ ಕ್ರಸ್ಟ್ ಗೇಟ್ ಘಟನೆಗೆ ಸರ್ಕಾರವೇ ನೇರ ಹೊಣೆ:
ಕೊಪ್ಪಳ : ತುಂಗಭದ್ರ ಕ್ರಸ್ಟ ಗೇಟ್ ಕಿತ್ತುಕೊಂಡು ಹೋಗಿರುವ ಸ್ಥಳ ವೀಕ್ಷಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮುನಿರಾಬಾದ್ ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ 60 ರಿಂದ 65 ಟಿಎಂಸಿ ನೀರು ಖಾಲಿ ಮಾಡಿದರೆ, ಮುಂದಿನ ರೈತರ ಜೀವನ ಏನು..? ಉತ್ತರಪ್ರದೇಶ, ಮಹಾರಾಷ್ಟ್ರ, ದಕ್ಷಿಣ ಭಾರತದ ಅನೇಕ ಆಣೆಕಟ್ಟುಗಳಲ್ಲಿ, ಈ ರೀತಿ ಕ್ರಸ್ಟ್ ಗೇಟ್ ಗಳು ಕಿತ್ತು ಇಂತಹ ಅವಘಡಗಳ ಸಂಭವಿಸಿದಾಗ ಏನು ಮಾಡಬಹುದು ಎಂಬುದನ್ನು ತಿಳಿಸಲು ತಜ್ಞರ ತಂಡ ಇದೆ, ಅವರ ಅಭಿಪ್ರಾಯ ಸಂಗ್ರಹಿಸಿ ನೀರನ್ನು ಉಳಿಸಿ, ಕ್ರಸ್ಟ್ ಗೇಟ್ ಅನ್ನು ಕೂಡಿಸುವ ಕೆಲಸವನ್ನು ಮಾಡಬೇಕಾಗಿದೆ, ಈಗ ಹೊಸ ಹೊಸ ಟೆಕ್ನಾಲಜಿ ಇರುವುದರಿಂದ ಮತ್ತು ವಿಜ್ಞಾನ ಮುಂದುವರಿದರುವುದರಿಂದ ಇಂತಹ ಸಂದರ್ಭದಲ್ಲಿ ರೈತರಿಗೆ ನೀರನ್ನು ಉಳಿಸಿ ಕ್ರಸ್ಟ್ ಗೇಟ್ ಕೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು, ಆನ್ಲೈನ್ ನಲ್ಲಿ ಸಂಬಂಧಪಟ್ಟಂತೆ ಜಲ ತಜ್ಞರು, ನೀರಾವರಿಯ ಇಲಾಖೆ ಅಧಿಕಾರಿಗಳನ್ನು, ಇಂಜಿನಿಯರ್ ಗಳನ್ನು, ಎಕ್ಸ್ಪರ್ಟ್ಗಳನ್ನು ಸಂವಾದದ ಮೂಲಕ ಮೀಟಿಂಗ್ ನಡೆಸಿ, ತುಂಗಭದ್ರೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಈ ಭಾಗದ ರೈತ ಹೋರಾಟಗಾರ, ಬಿಜೆಪಿ ಹಿರಿಯ ಮುಖಂಡ, ಕಾಡ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪರುದ್ರಸ್ವಾಮಿ ವಕೀಲರು ಬಿಜೆಪಿ ಹಿರಿಯ ನಾಯಕರಿಗೆ ತಮ್ಮ ಅನಿಸಿಕೆಯನ್ನು ವಿವರಿಸಿದ್ದರು.
ಬಹಳ ವರ್ಷಗಳ ನಂತರ ಈ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಎಲ್ಲಾ ಜಲಾಶಯಗಳ ಭರ್ತಿಯಾಗಿದ್ದು, ರೈತ ಸಮುದಾಯದಲ್ಲಿ ಬಹಳಷ್ಟು ಖುಷಿ ಮೂಡಿಸಿದ್ದು ಇಂತಹ ಸಂದರ್ಭಗಳಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ 4 ಜಿಲ್ಲೆಗಳ ರೈತರ ಜೀವನಾಡಿಯಾಗಿದ್ದ ತುಂಗಭದ್ರಾ ನದಿ ಇದೀಗ ತುಂಗಭದ್ರೆ ಆಣೆಕಟ್ಟಿನ 19 ಕ್ರಷ್ಟ್ ಗೇಟ್ ಚೈನ್ ಸೂಕ್ತ ನಿರ್ವಹಣೆ ಕೊರತೆ ಇಂದ ತುಂಡಾಗಿ ರೈತರ ಬೆಳೆ ನಾಶಮಾಡುವ ಪರಿಸ್ಥಿತಿ ಬಂದೊದಗಿರುವುದು ದುರದೃಷ್ಟಕರ.
ಈ ಭಾಗದ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯವು ಕಳೆದ ಎರಡು ವರ್ಷದಿಂದ ಭರ್ತಿ ಯಾಗದೇ ಉಳಿದಿದ್ದರೂ ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಇದೇ ಜಲಾಶಯದಿಂದ ಹಸನಾಗಬೇಕಿದ್ದ ರೈತರ ಬದುಕು ಕಷ್ಟದಲ್ಲಿ ಸಿಲುಕಿದೆ.
ಜಲಾಶಯಗಳು ಪ್ರತಿ ವರ್ಷ ತಪಾಸಣೆಯಾಗಿ ಅವಶ್ಯಕವಾಗಿರುವ ಸೂಕ್ತ ರೀಪೇರಿ ಕೆಲಸಗಳನ್ನು ಆಯಾ ಸಮಯಕ್ಕೆ ಮಾಡಬೇಕಾಗಿರುವುದು ನೀರಾವರಿ ಇಲಾಖೆಯ ಕೆಲಸವಾಗಿದೆ. ಇಂತಹ ಸಾಮಾನ್ಯ ಕೆಲಸ ಮಾಡಿಸುವಲ್ಲಿ ಇಡೀ ಸರ್ಕಾರ, ನೀರಾವರಿ ಇಲಾಖೆ ಸಂಪೂರ್ಣ ವಿಫಲವಾಗಿದೆ.ಇದೀಗ ಈ ಕ್ರಷ್ಟ್ ಗೇಟ್ ಸರಿಪಡಿಸುವ ಸಲುವಾಗಿ 60 ಲಕ್ಷ ಕ್ಯೂಸೆಕ್ಸ್ ನೀರು ವ್ಯರ್ಥವಾಗುವುದಲ್ಲದೆ ರೈತರ ಬೆಳೆ ನಾಶದತ್ತ ಮುನ್ನುಗ್ಗುತ್ತಿದೆ. ಸುಮಾರು 6 ಲಕ್ಷ 50 ಸಾವಿರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿದೆ ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ತಾಣ ಹಂಪಿ ನೀರಿನಲ್ಲಿ ಮುಳುಗಿದೆ, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡು ಸಂಕಷ್ಟದಲ್ಲಿವೆ ಇನ್ನಾದರೂ ಸರ್ಕಾರ ಕಣ್ಣಿದ್ದರೆ ಎಂದು ಬಿಜೆಪಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್,ಮಾಜಿ ಸಂಸದ ಶಿವರಾಮೇಗೌಡ,
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಕೂರು,ಎಂ.ಎಲ್ಸಿ.ಹೇಮಲತಾ ನಾಯಕ,ಆನಂದ್ ಸಿಂಗ್,ಸುರೇಶ ಬಾಬು,ಕೆ.ಬಸವರಾಜ್,ಬಸವರಾಜ ಕೊಪ್ಪಳ, ಸೇರಿದಂತೆ ಸಾವಿರಾರು ರೈತರು ಸೇರಿದಂತೆ ಇತರರು ಇದ್ದರು