ಒದುವ ಸಮಯದಲ್ಲಿ ಗಮನವಿಟ್ಟು ಒದಿದಾಗ ಮಾತ್ರ ತಮ್ಮ ಗುರಿಯನ್ನು ತಾವು ಸುಲಭವಾಗಿ ತಲುಪಲು ಸಾಧ್ಯ. ಅದಕ್ಕಾಗಿ ತಾವು ನಿರಂತರ ಪರಿಶ್ರಮ ಪಡಬೇಕು ಎಂದು ಕೊಪ್ಪಳದ ಅಪರ ಜಿಲ್ಲಾಧಿಕಾರಿಗಳಾದ ಸಿದ್ಧರಾಮೇಶ್ವರ ಅವರು ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೩-೨೪ನೇ ಸಾಲೀನ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದೆ ಈ ಹಂತದಲ್ಲಿ ಉತ್ತಮ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಯಾವ ಸಾದನೆಯನ್ನಾದರೂ ಮಾಡಬಹುದು. ತಾವೆಲ್ಲರೂ ಒದುವ ಪರಿಶ್ರಮವಾದಿಗಳಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಮಾತನಾಡಿದರು. ನಂತರ ಮಹಾವಿದ್ಯಾಲಯ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾದನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿ ಮಂಡಲಿ ಕಾರ್ಯಧ್ಯಕ್ಷರಾದ ಮಹೇಶ ಬಿರಾದಾರ ವಾರ್ಷಿಕ ವರದಿ ಮಂಡಿಸಿದರು. ಕ್ರೀಡಾ ವಿಭಾಗದ ಮುಕ್ಯಸ್ಥ ವಿನೋದ ಮುದಿಸನಗೌಡರ್ ಕ್ರೀಡಾ ವರದಿ ವಾಚಿಸಿದರು. ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಸ್ವಾಗತ ಕೋರಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶರಣಬಸಪ್ಪ ಬಿಳಿಯಲೆ ನಿರೂಪಿಸಿದರು. ಡಾ. ಶಶಿಕಾಂತ ಉಮ್ಮಾಪುರೆ ವಂದಿಸಿದರು. ರಾ. ಸೇ.ಯೋ. ಅಧಿಕಾರಿ ಡಾ.ರಾಜು ಹೊಸಮನಿ, ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಡಾ. ವೆಂಕಟೇಶ ನಾಯ್ಕ, ಈಶಪ್ಪ ದೊಡ್ಡಮನಿ, ಡಾ. ಮಂಜುನಾಥ. ಎಂ, ಪ್ರವೀಣ ಹಾದಿಮನಿ, ಡಾ. ಕಳಕನಗೌಡ ಪಾಟೀಲ್, ಡಾ. ಶರಣಪ್ಪ ಜಾಲಿಹಾಳ, ಡಾ. ಸುಂದರ್ ಮೇಟಿ, ಅಮರೇಶ ಸುಂಕನುರ, ಶ್ರೀದೇವಿ, ಡಾ. ಸುಮಲತಾ, ಸ್ವಾತಿ ಹಿರೇಮಠ, ಸೋಮಶೇಕರ, ಶರಣಪ್ಪ ರಾಠೋಡ, ಶರಣಪ್ಪ ಗುಳಗುಳಿ, ಡಾ.ಕರಿಬಸವೇಶ್ವರ, ಡಾ. ಪ್ರಶಾಂತ ಕೊಂಕಲ್, ಡಾ. ಅರುನಕುಮಾರ್ ಎ.ಜಿ, ಡಾ. ಪಿ.ಎಸ್. ಹುಲ್ಲುರ್ , ವಿದಾರ್ಥಿ ಮಂಡಳಿ ಕಾರ್ಯದರ್ಶಿ ಕು. ಅಮೃತಾ ಹಾಗೂ ಮಹಾವಿದ್ಯಾಲಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *