ಕುಕನೂರ: ತಾಲೂಕಿನ ಶಿರೂರ ಗ್ರಾಮದ ಡಾ.ಅಂಬೇಡ್ಕರ್ ನಗರದ ಶ್ರೀ ದುರ್ಗಾದೇವಿ ಹಾಗೂ ಮಲಿಯಮ್ಮದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜ ಸೇವಾ ಅಭಿವೃದ್ಧಿ ಸಮಿತಿ ವತಿಯಿಂದ ಜಾತ್ರಾ ಮಹೋತ್ಸವ ಹಾಗೂ 25 ನೇ ವರುಷದ 11 ಜೋಡಿ ಸಾಮೂಹಿಕ ವಿವಾಹ ಮೇ 27 ರಂದು ನಡೆಯಲಿದೆ ಎಂದು ಮುಖಂಡ ಈಶಪ್ಪ ಶಿರೂರ ಹೇಳಿದರು.
ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಶಿರೂರು ಗ್ರಾಮದಲ್ಲಿ ಕಳೆದ 24 ವರ್ಷಗಳಿಂದ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಡಾ. ಅಂಬೇಡ್ಕರ್ , ಡಾ.ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಾ ಬಂದಿದ್ದೇವೆ, ಎಲ್ಲ ಧರ್ಮದ ಗುರು ಹಿರಿಯರ ಸಹಕಾರದಲ್ಲಿ ಈ ಕಾರ್ಯ ನಡೆದಿದ್ದು, ಸಾಮೂಹಿಕ ವಿವಾಹ ಮೂಲಕ ಬಡವರಿಗೆ ಸಹಾಯಕ ವಾಗಿದೆ ,ಅನೇಕ ಹರ ಚರ ಗುರುಗಳ ಸಾನ್ನಿಧ್ಯದಲ್ಲಿ ವಿವಾಹ ಹಾಗೂ ಮಹನೀಯರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇಟಗಿಯ ಶಿವಶರಣ ಮರುಳಸಿದ್ದೇಶ್ವರ ಮಠದ ಗದಿಗೆಪ್ಪಜ್ಜನವರು ಮಾತನಾಡಿ, ಈ ವರ್ಷ ಮಳೆ ಬೆಳೆ ಚೆನ್ನಾಗಿದೆ ರೈತರು ಚಿಂತೆ ಮಾಡಬಾರದು, ಶಿರೂರು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಾಲೂಕಿನ ಸಮಸ್ತ ಜನತೆಗೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸಪ್ಪ ಎಚ್. ಹೊಳೆಯಪ್ಪನವರ, ಯಮನೂರಪ್ಪ ಕೊರಡಕೇರಿ, ಈರಪ್ಪ ನಡುಲಮನಿ, ಮುದಿಯಪ್ಪ ಕಡೆಮನಿ, ರಾಮಣ್ಣ ಹೊಸಮನಿ, ದುರಗಪ್ಪ ಕಡೆಮನಿ ಇತರರು ಪಾಲ್ಗೊಂಡಿದ್ದರು